ಕರ್ನಾಟಕ ರಾಜ್ಯ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಪ್ರತಿವರ್ಷ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.
2025-26ನೇ ಸಾಲಿನಲ್ಲಿ ಕೃಷಿ ಇಲಾಖೆಯು ರೈತರಿಗೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದ್ದು, ಅದರಲ್ಲಿ ಕೃಷಿ ಭಾಗ್ಯ ಯೋಜನೆಯು ಪ್ರಮುಖವಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ, ತಂತಿ ಬೇಲಿ, ಟಾರ್ಪಲ್ ಹೊದಿಕೆ, ಡೀಸೆಲ್ ಇಂಜಿನ್, ಮತ್ತು ತುಂತುರು ನೀರಾವರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸಹಾಯಧನ ಲಭ್ಯವಾಗಲಿದೆ.
The Karnataka State Government is implementing new schemes every year for farmers’ welfare. In 2025-26, the Department of Agriculture has announced several important projects to the farmers, of which the Agriculture Bhagya Scheme is important. Under this scheme, subsidy will be available for various facilities including agricultural ponds, wire fence, tarpaulin blanket, diesel engine, and spray irrigation. Applications are invited from farmers to obtain facilities under the scheme. Against this backdrop, what is the agricultural fortune project? Let’s learn how to apply for the subsidy for farmers.
- Agricultural pits: Assistance will be available for rain water storage.
- Wire Fence: Crops will be helped to build a wire fence to protect crops from animals
- Tarpal blanket: Tarpals are provided to prevent water stored in the farm pits from avoiding vapor.
- Field Live: Subsidy is being given to prevent soil erosion and build water.
- Diesel Engine: Diesel subsidy will also be available for agricultural work.
- Spray Irrigation: Subsidy for the use of spray irrigation system for water efficient use is being subsidized under the scheme.
90 per cent subsidy for the construction of farm pits
Under the scheme, 80% of the general category of farmers and beneficiaries belonging to the Scheduled Castes and Scheduled Tribes are given subsidy for the construction of agricultural pits.
Subsidy for spray and drip irrigation
Under the Micro Irrigation Scheme, the government has to pay the farmers a percentage of spraying and drip irrigation units. 90 percent subsidy. Farmers must have a permanent irrigation or tube well to avail them of these.
What is the qualification criteria?
Here are the qualifying criteria for the Agricultural Bhagya Scheme:
- Land: Farmers must have 1 acre or more agricultural land.
- Financial Assistance: Farmers who have received pump set and drip irrigation subsidy over the past three years are not entitled to subsidize those units under this scheme. However, they can seek financial assistance for the construction of agricultural pits.
- Farmer Identification Number: Farmers must have a mandatory farmer identification number (FID) to take advantage of the project.
Steps of the application process: - Application submission: Farmers should apply for their nearest Farmer Contact Center or Taluk Assistant Director of Agriculture.
- Field Verification: After reviewing your application, agricultural officers will visit your yard and inspect the location.
- After the verification, eligible farmers will be given a list of work and estimation through K-Kisan software within a week.
- Implementation of the project: According to this order, farmers can start installing agricultural ponds, wire fence, micro irrigation etc. This progress is recorded through GPS photos.
- Release of Financial Assistance: Once the implementation of all units is complete, the necessary documents must be submitted. After the final review of the officers, the project cost is transferred to the farmer’s account
ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಕೃಷಿ ಭಾಗ್ಯ ಯೋಜನೆ? ಇದರಿಂದ ರೈತರಿಗೆ ದೊರೆಯುವ ಸಹಾಯಧನ ಎಷ್ಟು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.
• ಕೃಷಿ ಹೊಂಡ: ಮಳೆ ನೀರು ಸಂಗ್ರಹಣೆಗೆ ಸಹಾಯ ಲಭ್ಯವಾಗಲಿದೆ.
• ತಂತಿ ಬೇಲಿ: ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಲು ತಂತಿ ಬೇಲಿ ನಿರ್ಮಿಸಲು ನೆರವು ದೊರೆಯಲಿದೆ
• ಟಾರ್ಪಲ್ ಹೊದಿಕೆ: ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ಆವಿಯಾಗದಂತೆ ತಡೆಯಲು ಟಾರ್ಪಲ್ಗಳನ್ನು ಒದಗಿಸಲಾಗುತ್ತದೆ.
• ಕ್ಷೇತ್ರ ಬದು: ಮಣ್ಣಿನ ಸವೆತ ತಡೆಗಟ್ಟಲು ಮತ್ತು ನೀರು ಇಂಗಿಸಲು ಬದುಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುತ್ತಿದೆ.
• ಡೀಸೆಲ್ ಇಂಜಿನ್: ಕೃಷಿ ಕಾರ್ಯಗಳಿಗೆ ನೆರವು ಡೀಸೆಲ್ ಸಬ್ಸಿಡಿ ಕೂಡ ಲಭ್ಯವಾಗಲಿದೆ.
• ತುಂತುರು ನೀರಾವರಿ: ನೀರಿನ ಸಮರ್ಥ ಬಳಕೆಗೆ ತುಂತುರು ನೀರಾವರಿ ಪದ್ದತಿ ಅಳವಡಿಕೆಗೆ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ.
ಕೃಷಿ ಹೊಂಡ ನಿರ್ಮಾಣಕ್ಕೆ ಶೇ.90ರಷ್ಟು ಸಬ್ಸಿಡಿ
ಯೋಜನೆಯಡಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ ಶೇ 80% ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಶೇ 90% ರಷ್ಟು ಸಹಾಯಧನ ನೀಡಲಾಗುತ್ತದೆ.
ತುಂತುರು ಮತ್ತು ಹನಿ ನೀರಾವರಿಗೆ ಸಹಾಯಧನ
ಸೂಕ್ಷ್ಮ ನೀರಾವರಿ ಯೋಜನೆಯಡಿ, ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಅಳವಡಿಸಲು ಸರ್ಕಾರವು ರೈತರಿಗೆ ಶೇ. 90ರಷ್ಟು ಸಹಾಯಧನ ನೀಡುತ್ತದೆ. ಇವುಗಳ ಸೌಲಭ್ಯವನ್ನು ಪಡೆಯಲು ರೈತರು ಶಾಶ್ವತ ನೀರಾವರಿ ಮೂಲ ಅಥವಾ ಕೊಳವೆ ಬಾವಿ ಹೊಂದಿರಬೇಕು.
ಅರ್ಹತಾ ಮಾನದಂಡಳೇನು?
ಕೃಷಿ ಭಾಗ್ಯ ಯೋಜನೆಗೆ ಅರ್ಹತಾ ಮಾನದಂಡಗಳು ಇಲ್ಲಿವೆ:
• ಭೂಮಿ: ರೈತರು 1 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರಬೇಕು.
• ಹಣಕಾಸು ನೆರವು: ಕಳೆದ ಮೂರು ವರ್ಷಗಳಲ್ಲಿ ಪಂಪ್ ಸೆಟ್ ಮತ್ತು ಹನಿ ನೀರಾವರಿ ಸಬ್ಸಿಡಿ ಪಡೆದ ರೈತರು ಈ ಯೋಜನೆ ಅಡಿಯಲ್ಲಿ ಆ ಘಟಕಗಳಿಗೆ ಮತ್ತೆ ಸಹಾಯಧನ ಪಡೆಯಲು ಅರ್ಹರಲ್ಲ. ಆದರೆ, ಅವರು ಕೃಷಿ ಹೊಂಡ ನಿರ್ಮಾಣಕ್ಕೆ ಹಣಕಾಸಿನ ನೆರವು ಪಡೆಯಬಹುದು.
• ರೈತ ಗುರುತಿನ ಸಂಖ್ಯೆ : ಯೋಜನೆಯ ಲಾಭ ಪಡೆಯಲು ರೈತರು ಕಡ್ಡಾಯವಾಗಿ ರೈತ ಗುರುತಿನ ಸಂಖ್ಯೆ (FID) ಹೊಂದಿರಬೇಕು.
ಅರ್ಜಿ ಪ್ರಕ್ರಿಯೆಯ ಹಂತಗಳು:
• ಅರ್ಜಿ ಸಲ್ಲಿಕೆ: ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.
• ಕ್ಷೇತ್ರ ಪರಿಶೀಲನೆ: ನಿಮ್ಮ ಅರ್ಜಿಯ ಪರಿಶೀಲನೆಯ ನಂತರ, ಕೃಷಿ ಅಧಿಕಾರಿಗಳು ನಿಮ್ಮ ಹೊಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ.
• ಕಾರ್ಯಾದೇಶ : ಪರಿಶೀಲನೆ ನಂತರ, ಅರ್ಹ ರೈತರಿಗೆ ಒಂದು ವಾರದೊಳಗೆ K-KISAN ತಂತ್ರಾಂಶದ ಮೂಲಕ ಕಾರ್ಯಾದೇಶ ಮತ್ತು ಅಂದಾಜು ಪಟ್ಟಿಯನ್ನು ನೀಡಲಾಗುತ್ತದೆ.
• ಯೋಜನೆಯ ಅನುಷ್ಠಾನ: ಈ ಆದೇಶದ ಪ್ರಕಾರ, ರೈತರು ಕೃಷಿ ಹೊಂಡ, ತಂತಿ ಬೇಲಿ, ಸೂಕ್ಷ್ಮ ನೀರಾವರಿ ಇತ್ಯಾದಿ ಘಟಕಗಳನ್ನು ಅಳವಡಿಸಲು ಪ್ರಾರಂಭಿಸಬಹುದು. ಈ ಪ್ರಗತಿಯನ್ನು GPS ಫೋಟೋಗಳ ಮೂಲಕ ದಾಖಲಿಸಲಾಗುತ್ತದೆ.
• ಆರ್ಥಿಕ ನೆರವು ಬಿಡುಗಡೆ: ಎಲ್ಲಾ ಘಟಕಗಳ ಅನುಷ್ಠಾನ ಪೂರ್ಣಗೊಂಡ ನಂತರ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅಧಿಕಾರಿಗಳ ಅಂತಿಮ ಪರಿಶೀಲನೆಯ ನಂತರ, ಯೋಜನಾ ವೆಚ್ಚವನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ