ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಓದುಗರು ಇಂದಿನ ಒಂದು ಲೇಖನವನ್ನು ಕೊನೆವರೆಗೂ ಓದಿ ಏಕೆಂದರೆ ನಿಮಗಾಗಿಯ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ನಮ್ಮ ರಾಜ್ಯದಲ್ಲಿ ನವದಂಪತಿಗಳಿಗೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಕಾಯುತ್ತಿದ್ದರೆ ಅಷ್ಟೇ ಅಲ್ಲದೆ ಇವರ ಹೆಸರು ಬೇರೆ ರೇಷನ್ ಕಾರ್ಡ್ ನಲ್ಲಿ ಇರುತ್ತೆ ರೇಷನ್ ಕಾರ್ಡ್ ಇರುವ ಹೆಸರನ್ನು ತೆಗೆದು ಹೊಸ ರೇಷನ್ ಕಾರ್ಡ್ ಮಾಡಿಸಬೇಕಾಗುತ್ತದೆ ಇಂತಹ ಸಂದರ್ಭಗಳಲ್ಲಿ ಬಹಳ ಕಷ್ಟಕರ ಸಂಗತಿಯಾಗಿರುತ್ತೆ.
ಈ ಮೊದಲು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾಗಿ ಇರಬಹುದು ಅಥವಾ ತಿದ್ದುಪಡಿ ಡಿಸೆಂಬರ್ 31 2024 ಇದೇ ಕೊನೆ ದಿನಾಂಕವಾಗಿತ್ತು ಸರ್ಕಾರ ನಿಗದುಪಡಿಸಿತ್ತು.
ಆದರೆ ರಾಜ್ಯದಲ್ಲಿ ಇನ್ನು ನವದಂಪತಿಗಳು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಾಗಿದೆ ಒಂದಲ್ಲ ಎರಡಲ್ಲ ಲಕ್ಷಗಟ್ಟಲೆ ಜನಗಳು ಹೊಸ ರೇಷನ್ ಕಾರ್ಡ್ ಗೋಸ್ಕರ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ ಇವರೆಲ್ಲ ಬೇಡಿಕೆಗಳನ್ನು ಈಡೇರಿಸಲು ಈಗ ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ:

ಸದ್ಯದ ಪರಿಸ್ಥಿತಿಯಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಮತ್ತು ತಿದ್ದುಪಡಿ ಮಾಡಿಸಲು ದಿನಾಂಕವನ್ನು ಮುಂದೂಡಲಾಗಿದೆ ಮೊದಲು ಹಳೆಯ ದಿನಾಂಕವನ್ನು ಗಮನಿಸಿ ಈ ಮೊದಲು ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡಿಸಲು ಡಿಸೆಂಬರ್ 31 2024 ಇದೇ ಕೊನೆಯ ದಿನಾಂಕವಾಗಿದ್ದು ಆದರೆ ಇದೀಗ ದಿನಾಂಕವನ್ನು ಮುಂದೂಡಿ ಜನೆವರಿ 31 2025ನೇ ದಿನಾಂಕವನ್ನು ಮಾಡಲಾಗಿದೆ.
ಹೊಸ ರೇಷನ್ ಕಾರ್ಡ್ ಗೆ ಯಾರ್ಯಾರು ಅರ್ಜಿ ಸಲ್ಲಿಸಬಹುದು..?
- ಹೊಸದಾಗಿ ಮದುವೆಯಾಗಿರುವ ನವದಂಪತಿಗಳು.
- ರೇಷನ್ ಕಾರ್ಡ್ ಇಲ್ಲದಿರುವಂತ ಕುಟುಂಬಗಳು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
- ಕುಟುಂಬದಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಉದಾಹರಣೆಗೆ ಸಣ್ಣ ಮಕ್ಕಳು ಐದು ವರ್ಷ ಒಳಗಡೆ ಇರುವಂತಹ ಮಕ್ಕಳಿಗೆ ಜನ ಪ್ರಮಾಣ ಪತ್ರ ಬೇಕಾಗುತ್ತೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು..?
- ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್
- ವಿಳಾಸದ ಪುರಾವೆಗಳು
- ಜಾತಿ ಆದಾಯ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ ಒಂದು ವೇಳೆ ಮಗು ಐದು ವರ್ಷದ ಒಳಗಡೆ ಇದ್ದರೆ.
- ಪಾಸ್ಪೋರ್ಟ್ ಗಾತ್ರದ ಫೋಟೋ.
- ಇನ್ನಿತರ ದಾಖಲೆಗಳು ಬೇಕಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗಿರುವ ದಾಖಲೆಗಳು.?
- ಹಳೆಯ ರೇಷನ್ ಕಾರ್ಡ್
- ನೀವೇನಾದರೂ ವಿಳಾಸ ಬದಲಾವಣೆ ಮಾಡಲು ಮುಂದಾದರೆ ನಿಮ್ಮ ಲೈಟ್ ಬಿಲ್ ಅಥವಾ ನೀರಿನ ಬಿಲ್ ಅಥವಾ ಆಸ್ತಿ ತೆರಿಗೆ ಪಾವತಿ ಇತ್ಯಾದಿಗಳು ಬೇಕಾಗುತ್ತೆ.
- ಕುಟುಂಬದ ಸದಸ್ಯರ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಗೆ ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರ ಬೇಕಾಗುತ್ತದೆ.
- ಹೆಸರು ಬದಲಾವಣೆ ಮಾಡಲು ಮದುವೆ ನೊಂದಣಿ ಪತ್ರ ಬೇಕಾಗುತ್ತೆ.
- ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್.
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅಥವಾ ಹತ್ತಿರ ಇರುವಂತ ಕರ್ನಾಟಕ ಒನ್ ,ಗ್ರಾಮ ಒನ್ ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಸೆಂಟರ್ ಗಳು.