ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಉಚಿತ ಹೊಲಿಗೆ ಯಂತ್ರ ಯೋಜನೆ 2024 ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನೀವು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಬಹುದು ಹೌದು ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಇಂದಿನ ಈ ಒಂದು ಲೇಖನ ಬಹಳ ಸಹಾಯಕಾರಿಯಾಗುತ್ತೆ ಏಕೆಂದರೆ ಈ ಒಂದು ಲೇಖನದ ಮೂಲಕ ನೀವು ಉಚಿತ ಹೊಲಿಗೆ ಯಂತ್ರ ಹೇಗೆ ಪಡೆದುಕೊಳ್ಳಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರಿದ್ದರೆ ಹಾಗೂ ನಿಮ್ಮ ಬಂಧು ಬಾಂಧವರಲ್ಲಿ ತಪ್ಪದೇ ಇದನ್ನ ಶೇರ್ ಮಾಡಿ ಏಕೆಂದರೆ ಇದು ಉಚಿತವಾಗಿ ಸಿಗುವಂತಹ ಯೋಜನೆಯಾಗಿದೆ ಅರ್ಜಿ ಸಲ್ಲಿಸಿದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಹೀಗಾಗಿ ದಯವಿಟ್ಟು ಇದನ್ನ ನಿಮ್ಮ ಬಂಧು ಬಾಂಧವರಿಗೆ ಹಾಗೂ ನಿಮ್ಮ ಅಕ್ಕ ತಂಗಿಯರಿಗೆ ತಪ್ಪದೆ ಶೇರ್ ಮಾಡಿ ನೀವು ಕೂಡ ಲೇಖನವನ್ನ ಕೊನೆವರೆಗೂ ಓದಿ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದವರು ಕೇಂದ್ರ ಸರ್ಕಾರ ನೆನಪಿರಲಿ ರಾಜ್ಯ ಸರ್ಕಾರವಲ್ಲ ನಿಮಗೆ ನೇರವಾಗಿ ಕೇಂದ್ರ ಸರ್ಕಾರದ ಮೂಲಕ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, ಯಾರೆಲ್ಲಾ ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ ಇವರಿಗೆಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಅಡಿಯಲ್ಲಿ ಕೇಂದ್ರ ಸರ್ಕಾರವು ಸ್ವಯಂ ಉದ್ಯೋಗಕ್ಕೆ ಉತ್ತೇಜನವನ್ನು ನೀಡಲು ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಉಚಿತ ಹೊಲಿಗೆ ಯಂತ್ರ ಯೋಜನೆ:
(Free sewing machine scheme)

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಅರ್ಹ ಕುಶಲಕರ್ಮಿಗಳಿಗೆ ಉತ್ತೇಜನವನ್ನು ನೀಡಲು ವಿಶೇಷ ತರಬೇತಿಯನ್ನು ನೀಡಲಾಗುತ್ತದೆ ಇದರ ಜೊತೆಗೆ ನಿಮ್ಮ ಕಲೆಗಳಿಗೆ ಪ್ರೋತ್ಸಾಹ ಒದಗಿಸಲಾಗುತ್ತೆ.
ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ 18 ವರ್ಷ ಮೇಲ್ಪಟ್ಟಂತ ಕುಶಲಕರ್ಮಿಗಳಿಗೆ ಈ ಒಂದು ಯೋಜನೆ ಸಿಗಲಿದೆ. ಈ ಒಂದು ಯೋಜನೆ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹೊಸ ಉಪಕರಣ ಮತ್ತು ತಾಂತ್ರಿಕ ಜ್ಞಾನ ಹಾಗೂ ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ನಿಮಗೆ ಸಿಗಲಿದೆ.
ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್ ಖರೀದಿ ಮಾಡಲು ಅಂದರೆ ಉಚಿತ ಹೊಲಿಗೆ ಯಂತ್ರ ಖರೀದಿ ಮಾಡಲು ಈ ಯೋಜನೆಯ ಮೂಲಕ 15,000 ಮೌಲ್ಯ ಇರುವಂತಹ ಇ ವೋಚರ್ಸ್ ಅಥವಾ ಇ -ರೂಪಿ ನೀಡುತ್ತಾರೆ. ಈ ಪ್ರೋತ್ಸಾಹ ಧನವನ್ನು (ವೋಚರ್ಸ್) ಬ್ಯಾಂಕ್ ಮೂಲಕ ವಿತರಣೆ ಮಾಡಲಾಗುತ್ತೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೊಂದಣಿ ಆಗಿರುವಂತಹ ಎಲ್ಲ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದುಡಿಕರಿಸಿದ ನಂತರವೇ ಎಲ್ಲ ಕುಶಲಕರ್ಮಿಗಳಿಗೆ 5 ರಿಂದ 7 ದಿನಗಳ ತರಬೇತಿಯನ್ನು ನೀಡಲಾಗುತ್ತೆ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:
- ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವ್ಯಕ್ತಿ ಅಥವಾ ಮಹಿಳೆ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು ಅಂದರೆ ಟೈಲರಿಂಗ್ ನಲ್ಲಿ.
- ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇರುತ್ತೆ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಯಾವುದೇ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದಿರಬಾರದು.
- ಒಂದು ವೇಳೆ ಮನೆಯಲ್ಲಿ ಸರ್ಕಾರಿ ನೌಕರರಿದ್ದರೆ ನಿಮಗೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರಗಳು.
ಹೇಗೆ ಅರ್ಜಿ ಸಲ್ಲಿಸಬೇಕು:
ನೀವು ಕೂಡ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಬಯಸಿದರೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರ ಇರುವಂತಹ ಕರ್ನಾಟಕ ಓನ್ ಅಥವಾ ಗ್ರಾಮ ಓನ್ ಅಥವಾ ನಿಮ್ಮ ಹತ್ತಿರ ಇರುವಂತಹ ಗ್ರಾಮ ಪಂಚಾಯಿತಿ ಅಥವಾ CSC ಕೇಂದ್ರಗಳಿಗೆ ಬೇಡಿ ನೀಡಿ ಅರ್ಜಿ ಸಲ್ಲಿಸಬಹುದು.
ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಈ ಕೆಳಗಡೆ ಇದೆ ನೋಡಿ ಡೈರೆಕ್ಟ್ ಲಿಂಕ್.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
ಅರ್ಜಿ ಸಲ್ಲಿಸುವ ಲಿಂಕ್ : Click Here
ನಿಮಗೂ ಪ್ರತಿದಿನ ಇದೇ ತರನಾಗಿ, ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗ ಕುರಿತು ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ “karnatakasanje” ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.👇👇